
ಮಳೆಗಾಲವು ತಂಪು, ನಾನೆಯ ಹವಾಮಾನವನ್ನು ತರಲಿದೆ. ಆದರೆ ಈ ಋತು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಬಹುದಾದ ಸಮಯವೂ ಹೌದು. ವಿಶೇಷವಾಗಿ ಮಕ್ಕಳಿಗೆ ಹಾಗೂ ವೃದ್ಧರಿಗೆ ಜ್ವರ, ಶೀತ, ಕಫ ಸಾಮಾನ್ಯವಾಗಿ ಕಾಣಿಸುತ್ತವೆ. ಆದ್ದರಿಂದ, ನೀವು ಮತ್ತು ನಿಮ್ಮ ಕುಟುಂಬವು ಆರೋಗ್ಯವಂತರಾಗಿ ಇರಲು ಈ ಮನೆಮದ್ದುಗಳನ್ನು ಅನುಸರಿಸಬಹುದು.
1. ತುಳಸಿ-ಶುಂಠಿ ಕಷಾಯ ಕುಡಿಯಿರಿ
ತುಳಸಿ, ಶುಂಠಿ, ಮೆಣಸು, ಜೀರಿಗೆ ಹಾಕಿ ಕಷಾಯ ಮಾಡಬೇಕು. ಇದನ್ನು ದಿನಕ್ಕೆ 1-2 ಬಾರಿಗೆ ಕುಡಿಯುವುದು ಶೀತ-ಕಫವನ್ನು ಕಡಿಮೆ ಮಾಡುತ್ತದೆ.
2. ಬಿಸಿ ನೀರಿನ ಸೇವನೆ:
ಹಗುರವಾಗಿ ಬಿಸಿ ನೀರನ್ನು ದಿನವಿಡೀ ಕುಡಿಯಿರಿ. ಇದು ಕಫವನ್ನು ಕರಗಿಸಲು ಸಹಾಯ ಮಾಡುತ್ತದೆ.
ಉಪ್ಪು ನೀರಿನಿಂದ ಗಾರ್ಗಲ್ ಮಾಡುವುದು:
ಬಿಸಿ ಉಪ್ಪು ನೀರಿನಿಂದ ಬಾಯಿ ತೊಳೆಯುವುದು ಗಂಟಲು ನೋವಿಗೆ ಉಪಯುಕ್ತ.
4. ತೈಲ ಮಸಾಜ್ ಮಾಡುವುದು:
ಬಿಸಿ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿದರೆ ರಕ್ತ ಸಂಚಾರ ಉತ್ತಮವಾಗುತ್ತದೆ ಹಾಗೂ ತಂಪಿನಿಂದ ರಕ್ಷಣೆ ಸಿಗುತ್ತದೆ.
5.ಮಳೆ ನೀರಿನಿಂದ ದೂರವಿರಿ
ಮಳೆ ನೀರಲ್ಲಿ ಓಡುವುದು ಅಥವಾ ಮಳೆ ತಡಕುವುದು ರೋಗಗಳಿಗೆ ಆಹ್ವಾನ ನೀಡುತ್ತದೆ.
6. ಒದ್ದೆ ಬಟ್ಟೆ ತಕ್ಷಣ ಬದಲಾಯಿಸಿ:
ಬಿಸಿಯಾದ ಬಟ್ಟೆ ಧರಿಸುವುದು ಶೀತದಿಂದ ರಕ್ಷಿಸುತ್ತದೆ.
7. ಹೆಚ್ಚು ವಿಟಮಿನ್ ಸಿ ಆಹಾರ ಸೇವನೆ
ನಿಂಬೆ, ಮಾವಿನ ಹಣ್ಣು, ಕಿತ್ತಳೆ ಮುಂತಾದವುಗಳು ಇಮ್ಯುನಿಟಿ ಹೆಚ್ಚಿಸುತ್ತವೆ.
8.ಶುದ್ಧ ಆಹಾರ ಸೇವಿಸಿ
ಬಾಡಿದ ಅಥವಾ ರಸ್ತೆ ಆಹಾರ ತಪ್ಪಿಸಿ ಮನೆಯ ತಾಜಾ ಬಿಸಿ ಊಟ ಸೇವಿಸಿ.
9.ಹೆಚ್ಚು ವಿಶ್ರಾಂತಿ ಪಡೆಯಿರಿ:
ನಿದ್ರೆ ಮತ್ತು ವಿಶ್ರಾಂತಿ ಕಫ ಹಾಗೂ ಜ್ವರ ಕಡಿಮೆ ಮಾಡುತ್ತದೆ.
10.ಮಕ್ಕಳಿಗೆ ಜೇನುತುಪ್ಪ + ತುಳಸಿ ರಸ ಕೊಡಿ:
ಈ ಮಿಶ್ರಣವು ಶೀತಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
*****************************************************